Blog. » Theater

ಮೆಟ್ರೊ ಪ್ರಯಾಣ
ನೆನ್ನೆ The Common Air ನಾಟಕವನ್ನು ನೋಡಲು ಎಂದಿನಂತೆ ಮೆಟ್ರೊವಿನಲ್ಲಿ ಹೋದೆ. ಆದರೆ ಪ್ರಯಾಣದ ಪ್ರತಿಯೊಂದು ಹೆಜ್ಜೆಯಲ್ಲಿಯೂ ಹೊಸ ಹೊಸ ಅನುಭವಗಳು…

ಹೋಗುತ್ತಾ ನಾನು ಹೊರಟದ್ದೇ ಕೊಂಚ ತಡವಾಗಿ – ಬ್ರಿಜ್ ವ್ಯೂಗ್ರಾಫ್ ನೋಡುತ್ತಾ ಸಮಯದ ಪರಿವೆಯೇ ಇಲ್ಲವಾಗಿ ಮನೆಯಿಂದ ಹೊರಟಾಗಲೇ ೬:೦೫ ಆಗಿತ್ತು. [ಜಿಮ್ಮಿ ಕೇನ್ನ ಬಲಿಷ್ಠ ತಂಡವು ಕಟ್ಟಕಡೆಯ ಬೋರ್ಡಿನಲ್ಲಿ ಪರಾಜಯ ಹೊಂದಿತು]. ನಾಟಕ ಹಾಲಿವುಡಿನಲ್ಲಿ ೮:೦೦ ಘಂತೆಗೆ ಆರಂಭ. ಆದರೆ ಸಾಮಾನ್ಯವಾಗಿ ಒಳ್ಳೆ ಸ್ಥಳ ಸಿಕ್ಕಲು ಒಂದು ೨೦-೩೦ ನಿಮಿಷ ಮುಂಚೆಯೇ ತಲುಪುವುದು ಉತ್ತಮ. ಆಯಿತು, ಕಾಲೊರೆಡೊ/ಲೇಕ್ ರಸ್ತೆಗಳ ೭೮೦ ಬಸ್ ನಿಲ್ದಾಣ ತಲುಪಿದಾಗ ಸುಮಾರು ೬:೧೫. ೬:೧೧ಕ್ಕೆ ಒಂದು ಬಸ್ಸು ಹೋಗಿರಬೇಕು, ಮುಂದಿನ ಬಸ್ಸು ೬:೨೫ಕ್ಕೆ. ಹಾಲಿವುಡ್/ವೈನ್ ನಿಂದ ಬೇರೊಂದು ಬಸ್ಸು ಬೇರೆ ಹಿಡಿಯಬೇಕು. ಸ್ವಲ್ಪ ಆತಂಕದಿಂದಲೇ ಬಸ್ಸನ್ನು ನಿರೀಕ್ಷಿಸುತ್ತ್ ಕೂತೆ…

ಸುಮಾರು ೬:೨೦ಕ್ಕೆ ಎರಡು ೭೮೦ ಗಾಡಿಗಳು ಒಂದರ ಹಿಂದೆ ಒಂದು ಬಂದವು. ಹಿಂದಿನ ಗಾಡಿಯಲ್ಲಿ ಒಂದು ಸೈಕಲ್ಲಿತ್ತು. ಸಾಮಾನ್ಯವಾಗಿ ಸೈಕಲ್ಲುಗಳು, ವ್ಹೀಲ್ಚೇರ್ (ಚಕ್ರಕುರ್ಚಿ?!)ಗಳಿದ್ದಾಗ ಬಸ್ಸು ಸ್ವಲ್ಪ ತಡವಾಗಿ ಓಡುತ್ತೆ – ಅವುಗಳನ್ನು ಇಳಿಸಲು ಕೆಲವು ಕ್ಷಣಗಳು ಹೆಚ್ಚಿಗೆ ಬೇಕು – ಆದ್ದರಿಂದ ಮುಂದಿನ ಬಸ್ಸನ್ನು ಹತ್ತಿದೆ. ಅಲ್ಲದೆ ಮುಂದಿನ ಬಸ್ಸು ತಡವಾಗಿ ಹೊರಟಿದ್ದಿದ್ದರೆ ಸ್ವಲ್ಪ ವೇಗವಾಗಿ ತಲುಪಿಸಬಹುದೇನೊ…

ದಪ್ಪ ಗಾತ್ರದ ಚಾಲಕ, ಅಂಗಿಯನ್ನು ಷರಾಯಿಯೊಳಕ್ಕೆ ಸೆಕ್ಕಿಸಿಕೊಳ್ಳುವ ಗೋಜಿಗೆಲ್ಲ ಹೋಗಿಲ್ಲ. ನನ್ನ ತೊಡೆಗಿಂತ ಹೆಚ್ಚಿನ ಸುತ್ತಳತೆ ಅವನ ತೋಳುಗಳದ್ದು. ಸಿಡಿಲುಮುಖ. ಅವನನ್ನು ಎದುರುಹಾಕಿಕೊಳ್ಳುವುದು ಮೂರ್ಖತನ. ಹಸನ್ಮುಖಿಯಾಗಿ “ಹೆಲೊ” ಎಂದೆ, ಪಾಸು ತೋರಿಸುತ್ತಾ. ನನ್ನ ಮುಖವನ್ನು ದುರುಗುಟ್ಟಿ ನೋಡಿದ. ಕಾಲು ಕಿತ್ತೆ. ನನ್ನ ಮುಂದೆ ವಯಸ್ಸಾದ ಹೆಂಗಸರೊಬ್ಬರು ಹತ್ತಿದ್ದರು. ಕಾಸನ್ನು ಯಂತ್ರದೊಳಗೆ ಹಾಕಲು ಪ್ರಯಿತ್ನಿಸುತ್ತಿದ್ದಾರೆ, ಆದರೆ ನೋಟು ಒಳಗೆ ಹೋಗುತ್ತಲೇ ಇಲ್ಲ. ಪಾಪ, ಯಂತ್ರ ಕೆಟ್ಟಿದೆ ಅಂತ ಅವರಿಗೆ ಹೇಳುವುದಲ್ಲವೇ? ಯಂತ್ರವನ್ನು  ಎರಡು ಬಾರಿ ಕುಟ್ಟಿ ಅದೇನೋ ಸಂಜ್ಞೆ ಮಾಡಿದ. ಅವರಿಗೆ ಕೊನೆಗೂ ಅರ್ಥವಾಯಿತು. ಮುನ್ನೆಡೆದರು. “ಇದೆಂಥ ಶಕುನವೋ ಕಾಣೆ” ಎಂದು ಯೋಚಿಸುತ್ತಾ ಆಸನವನ್ನು ಸ್ವೀಕರಿಸಿದೆ.

ಬಸ್ಸು ಹೊರಟಿತು. ಮುಂದೆ ದೊಡ್ಡ ಇಂಧನಭಕ್ಷಿ ಟ್ರಕ್ಕಿನಲ್ಲಿ ಮಹಿಳೆಯೊಬ್ಬಳು ವೇಗದ ಮಿತಿಗನುಸಾರವಾಗಿ ಹೋಗುತ್ತಿದ್ದಾಳೆ. ಆದರೆ ಚಾಲಕಮಹಾಶಯನ ತಾಳ್ಮೆ ಬೇಗ ಇಂಗುತ್ತಿದೆ. ಜೋರಾಗಿ ಹಾರನ್ ಬಜಾಯಿಸಿದ. ಇವನು ಅರಚಿಕೊಂಡ ಅಂತ ಅವಳು ನಿಯಮೋಲ್ಲಂಘನ ಮಾಡಬೇಕೇ ಪಾಪ!? ಎರಡು ಕ್ಷಣ ಕಾದು ನೋಡಿದ. ಅವಳು ಮಿತವೇಗವಾಗಿಯೇ ಹೋಗುತ್ತಿದ್ದಾಳೆ. ಝರ್ರನೆ ಎಡಗಡೆಯ ಓಣಿ(lane)ಗೆ ಬಸ್ಸನ್ನು ತಿರುಗಿಸಿದ. ಆ ಓಣಿಯಲ್ಲಿ ಹಿಂದಿದ್ದ ಕಾರಿನವನು ಥಟ್ಟನೆ ಬ್ರೇಕಿನ ಕಡೆ ಕಾಲೊಗೆದ. ಅವಶ್ಯಕತೆಯಿರಲಿಲ್ಲ – ಚಾಲಕನಾಯಕ ಅಷ್ಟರಲ್ಲಿ ವೇಗವಾಗಿ ಮುಂದೆ ಸಾಗಿ ಪುನಃ ಬಲ ಓಣಿಯಲ್ಲಿ ಮಹಿಳೆಯ ಟ್ರಕ್ಕಿನ ಮುಂದೆ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಂಡಿದ್ದ. ಆದರೆ ಅನ್ಯಾಯವೇ – ಕೆಂಪು ದೀಪ!

ಮುಂದೆ ಬರುವ ಕೆಂಪು ದೀಪಗಳು ತನ್ನನ್ನು ತಡೆಯಲಾರವೆಂಬ ಪ್ರತಿಜ್ಞೆಗೆಯ್ದ. ದೂರದಲ್ಲಿ ಹಳದಿ ಕಂಡರೆ ತತ್ ಕ್ಷಣ ವೇಗವನ್ನು ಏರಿಸುತ್ತಿದ್ದ. ದೀಪದ ಮುಂದಿನ ದಾರಿ ವಾಹನಗಳಿಂದ ತುಂಬಿದ್ದು ಅಲ್ಲಿ ಮತ್ತೊಂದು ಬಸ್ಸಿಗೆ ಸ್ಥಳವಿಲ್ಲದಿದ್ದರೇನಂತೆ? ಅಡ್ಡದಾರಿಯಲ್ಲಿಯೇ ಬಸ್ ಪ್ರತಿಷ್ಠಾಪನೆ. ಹಳೆಯ ಪ್ಯಾಸಡೀನಾ ನಗರದಲ್ಲಿ ಜನಸಂದಣಿ ಹೆಚ್ಚು… ಏನು ಮಾಡುವುದು? ತನ್ನದೇ ಆದ ಬೇರೆ ಮಾರ್ಗದಲ್ಲಿ ನಡೆದ. ಇನ್ನು ಮುಂದೆ ಕಾಲೊರಾಡೊ ಬದಲು ನೇರವಾಗಿ ೨೧೦ ಹೆದ್ದಾರಿಯ ಮೇಲೇ ಬಿಟ್ಟ ಬಸ್ಸನ್ನು! ಬಸ್ ನಿಲ್ದಾಣಗಳಲ್ಲಿ ಜನರನ್ನು ಕಂಡರೆ ಅರ್ಧಮನಸ್ಕನಾಗಿಯೇ ಗಾಡಿಯನ್ನು ನಿಲ್ಲಿಸುತ್ತಿದ್ದ. ರಸ್ತೆಯ ಬಲತುದಿಗೆ ಹೋದರೆ ಹಿಂದಿರುವ ವಾಹನಗಳು ಮುನ್ನುಗ್ಗುವುವುವೇನೋ ಎಂಬ ಭಯದಿಂದೆಂಬಂತೆ ರಸ್ತೆಯ ಮಧ್ಯದಲ್ಲಿಯೇ ಜನರನ್ನು ಹತ್ತಿಸಿ ಇಳಿಸಿಕೊಳ್ಳುವುದು. ಭಾರತದಲ್ಲಿ ತರಬೇತಿ ಪಡೆದುಬಂದಂತಿತ್ತು ಅವನ ವಾಹನಚಾಲನೆ!

ಇಲ್ಲಿ ಒಂದು ಸಣ್ಣ ಉಪಕಥೆ. ಕ್ರಮಭಂಗ. ಹೀಗೆಯೇ ಒಂದು ನಿಲ್ದಾಣದಿಂದ ದುರ್ರನೆ ಹೊರಟಿದ್ದ. ಆಗ ಮುಂದೆ ಕೆಂಚು ಕೇಶದ ಸುಂದರ ಯುವತಿಯೊಬ್ಬಳು ಪ್ರತ್ಯಕ್ಷಳಾದಳು. ಸಣ್ಣದಾದ ದೇಹ, ಹೊಳೆಯುವ ಮೈಬಣ್ಣ. ಬಿಳಿಯ ವಸ್ತ್ರವನ್ನು ಧರಿಸಿದ ಅವಳನ್ನು ನೋಡಿದರೆ ಗಗನತಾರೆಯೊಬ್ಬಳು ಭೂಮಿಗೆ ಇಳಿದು ಬಂದಂತೆ ಭಾಸವಾಗುತ್ತಿತ್ತು. ಒಂದು ಕಾಲನ್ನು ಸ್ವಲ್ಪ ಹಿಂದಕ್ಕೆತ್ತಿದ್ದಳು, ಮಂಡಿಯನ್ನು ಮಡಿಸಿ. ಕೈ ಅಡ್ಡ ಹಾಕಿದಳು, ಎರಡೂ ಕಣ್ಣುಗಳನ್ನು ಮುಗ್ಧಳಾಗಿ ಮಿಟುಕಿಸಿದಳು. ಅವಳನ್ನು ಕಂಡಿದ್ದರೆ ರಾಮನಗರದ ಬಂಡೆಗಳೇ ನೀರಾಗುತ್ತಿದ್ದವು – ಇನ್ನು ಚಾಲಕೋತ್ತಮನ ಹೃದಯ ಕರಗದೇ ಇದ್ದೀತೇ? ನಡುರಸ್ತೆಯಲ್ಲೇ ಬಸ್ಸನ್ನು ನಿಲ್ಲಿಸಿದ, ಬಾಗಿಲು ತೆಗೆದ. ಯುವತಿ ಹತ್ತಿದಳು, ಬಸ್ಸನ್ನು ಪವಿತ್ರಗೊಳಿಸಿದಳು. ಚಾಲಕನನ್ನು ಕೃತಜ್ಞತಾಪೂರ್ವಕಳಾಗಿ ನೋಡಿದಳು. ಮುಗುಳ್ನಕ್ಕು ಮುತ್ತಿನ ಹಾರದಂತಿದ್ದ ತನ್ನ ದಂತಗಳ ಸಾಲನ್ನು ಪ್ರದರ್ಶಿಸಿದಳು. ಈ ಜಗತ್ತಿನಲ್ಲಿರುವ ಶ್ರೇಷ್ಠತೆಯೆಲ್ಲವೂ ಆ ಮಂದಹಾಸದಲ್ಲಿ ಪ್ರತಿಬಿಂಬಿಸುತ್ತಿತ್ತು. ಚಾಲಕನ ಅಂತರಾಳದಲ್ಲಿ ಒಂದು ಪವಿತ್ರವಾದ ನಿಶ್ಕಲ್ಮಶವಾದ ಸೌಂದರ್ಯದ ಅನುಭವವಾದಂತಾಯಿತು. “ಬಹಳ ಧನ್ಯವಾದಗಳು” ಎಂದಳು. ಬೆಪ್ಪನೆ ಪೆದ್ದನಗು ನಕ್ಕ. ತನ್ನ ಶುಲ್ಕವನ್ನು ಕಟ್ಟಲು ಪ್ರಯತ್ನಿಸಿದಳು. ಯಂತ್ರ ಕೆಟ್ಟಿದೆಯೆಂದು ಹೇಳಲು ತತ್ ಕ್ಷಣ ಮಾತು ಹೊರಡದಿದ್ದರೂ ಅದು ಹೇಗೋ ಒಂದೆರಡು ಪದ ತೊದಲಿದ. “ಈ ಒಂದು ಡಾಲರಿನ ನೋಟನ್ನು ನಿನಗೇ ಕೊಡಲೇ?” ಎಂದಳು. ನಿನ್ನಿಂದ ದುಡ್ಡು ತೆಗೆದುಕೊಳ್ಳುವುದೇ! ಕಿಲಕಿಲ ನಕ್ಕಳು. ಸರಸ್ವತೀವೀಣೆಯ, ಗೋಪಾಲಕೃಷ್ಣವೇಣುವಿನ ಸಂಗೀತವನ್ನು ಮೀರಿಸುವಂಥ ಇಂಪು ಆ ನಗುವಿನಲ್ಲಿ. ಹಾಲಿನ ಚಾಕೋಲೇಟನ್ನು ಜೇನಿನಲ್ಲಿ ಅದ್ದಿದಂಥ ಮಾಧುರ್ಯ ಆ ನಗುವಿನಲ್ಲಿ. ಅವಳು ಬಸ್ಸಿನಲ್ಲಿರುವ ತನಕ ಬಸ್ಸು ಚಲಿಸುತ್ತಿದ್ದುದು ಹೆದ್ದಾರಿಯ ಮೇಲಲ್ಲ – ವಾಯುವಿನ ಮೇಲೆ, ಹತ್ತಿಯಂತಿದ್ದ ಮೋಡಗಳ ಮೇಲೆ.

ಕ್ರಮೇಣ  ಬಸ್ಸು  ಗ್ಲೆನ್ಡೇಲ್ ತಲುಪಿತು. ಗಗನತಾರೆ ಬಸ್ಸಿನಿಂದಿಳಿದಳು, ಬಸ್ಸು ಭೂಮಿಗಿಳಿಯಿತು. ಚಾಲಕೇಶ್ವರನ ಮನಸ್ಸು ಕಾರ್ಮುಗಿಲಾಯಿತು. ಅದರ ಪ್ರಭಾವ ತಟ್ಟಿದ್ದು ಮುಂದಿನ ನಿಲ್ದಾಣದಲ್ಲಿ ಕಾಯುತ್ತ ನಿಂತಿದ್ದ  ಮನುಷ್ಯನೊಬ್ಬನಿಗೆ. ಈ ಬಸ್ಸು ಆ ನಿಲ್ದಾಣದಲ್ಲಿ ನಿಲ್ಲಿಸದೇ ಹೋಗಿ ಅವನುಮುಂದಿನ ಬಸ್ಸಿನ ನಿರೀಕ್ಷೆ ಮಾಡಬೇಕಾಗಿ ಬಂದಿತು. ಹೀಗೆಯೇ ಮುಂದೆಯೂ ಮನಸ್ಸಿಗೆ ಬಂದ ದಾರಿಗಳನ್ನು ಅರಿಸಿಹೋಗಿ, ಕಡೆಗೂ ಹಾಲಿವುಡ್/ವೈನ್ ತಲುಪಿಸಿದ. ಇಷ್ಟೆಲ್ಲ ಸರ್ಕಸ್ ಮಾಡಿದ್ದರೂ ಹಿಂದಿನ ಬಸ್ಸು ಐದು-ಹತ್ತು ನಿಮಿಷಗಳಲ್ಲೇ ಬಂದು ಸೇರಿತು! ಅಲ್ಲಿಂದ ನಾಟಕಮಂದಿರದವರೆಗಿನ ಪ್ರಯಾಣ ನಿರ್ವಿಘ್ನವಾಗಿ ನಡೆಯಿತು. ಹಿಂತಿರುಗಿ ಬರುತ್ತಾ ನಡೆದ ಕಥೆ ಅನಂತರ…